ಹಳ್ಳಿ ಜೀವನ ಲೇಸು

ಹಳ್ಳಿ ಜೀವನ ಎಷ್ಟು ಜನರಿಗೆ ಇಷ್ಟ ಎನ್ನುವುದು ಹೇಳಲು ಕಷ್ಟ. ಹಳ್ಳಿ ಜೀವನ ನನಗಂತೂ ತುಂಬಾ ಇಷ್ಟ. ಯಾಕೆಂದ್ರೆ ನನಗೆ ಹಳ್ಳಿ ಬದುಕಿನ ಸುಖ ಕಷ್ಟ ಗಳು ಗೊತ್ತಿದೆ. ಆದರೂ ಹಳ್ಳಿ ಜೀವನ ತುಂಬ ಒಳ್ಳೆಯದು. ದಿನ ಬೆಳಗಾದರೆ ಪಕ್ಷಿಗಳ ಕಲರವ, ಧನ ಕರುಗಳ ಅಂಬಾ ಎನ್ನುವ ಕೂಗು. ಸುತ್ತಲೂ ಗದ್ದೆ ತೋಟ ಅದರ ಮಧ್ಯದಲ್ಲಿ ಮನೆ. ಅಡಿಕೆ, ತೆಂಗು ಹಲಸು ಮಾವಿನ ಮರ, ಸೀಬೆ ಮರ ಹೀಗೆ ಹತ್ತು ಹಲವಾರು ಮರಗಳು.

ಹಳ್ಳಿಯ ವಾತಾವರಣ ತುಂಬ ಚೆನ್ನಾಗಿರುತ್ತೆ. ಸ್ವಚ್ಛ ಗಾಳಿ ಶಾಂತ ವಾತಾವರಣ. ಎಲ್ಲರಿಗೂ ಹಳ್ಳಿಯಲ್ಲಿ ಇರಲು ಸಾಧ್ಯವಾಗುವುದಿಲ್ಲ. ಸ್ವಲ್ಪ ಸಿಟಿ ಬದುಕಿಗೆ ಅಡ್ಜಸ್ಟ್ ಆದವರಿಗೆ ಹಳ್ಳಿ ಜೀವನ ತುಂಬ ಕಷ್ಟ.
ಸ್ವಲ್ಪ ದಿನಗಳ ಹಿಂದೆ ನಾನು ಯೌಟ್ಯೂಬ್ ನಲ್ಲಿ ನೋಡಿದ ಪ್ರಕಾರ ಕೆಲ ಸಿಟಿ ಮಂದಿ ಊರಿಗೆ ಬಂದು ಬದುಕು ನಡೆಸುತ್ತಾರೆ. ಸಿಟಿ ಜೀವನ ಸಾಕು ಆರಾಮಾಗಿ ಹಳ್ಳಿಯಲ್ಲೇ ಇರುತ್ತೇವೆ ಅಂತ ಹೇಳುವವರು ಇದ್ದಾರೆ. ಇದಕ್ಕೆ ಉದಾಹರಣೆ ಎಂದರೆ ಒಬ್ಬ ಬ್ಯಾಂಕ್ ಉದ್ಯೋಗಿ ಹದಿನೈದು ವರ್ಷ ಸಿಟಿ ಯಲ್ಲಿ ಇದ್ದವರು ಇವಾಗ ತಮ್ಮ ಸ್ವಂತ ಹಳ್ಳಿಗೆ ಬಂದು ಸಾವಯವ ಕೃಷಿಗೆ ಮನಸೋತು ಅದನ್ನೇ ತಮ್ಮ ವ್ರತ್ತಿಯಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇದು ನಂಬಲು ಕಷ್ಟ ಆದರೆ ನಿಜ. ಅವರು ಹೇಳುವ ಪ್ರಕಾರ ಅವರಿಗೆ ಕೃಷಿಯ ಹಿನ್ನಲೆ ಇಲ್ಲ ಅವ್ರ ಕುಟುಂಬದಲ್ಲಿ ಕೃಷಿ ಮಾಡುವವರು ಯಾರು ಇಲ್ಲ. ಆದರೂ ಅವರಿಗೆ ಕೃಷಿಯ ಬಗ್ಗೆ ಒಲವು.


ಹೀಗೆ ಎಷ್ಟೋ ಜನರು ಸಿಟಿ ಯಿಂದ ಹಳ್ಳಿಗೆ ಬಂದ ಉದಾಹರಣೆಯು ಇದೆ.
ಆಧುನಿಕ ಜೀವನ ಲೈಫ್ ಸ್ಟೈಲ್ ಒತ್ತಡದ ಜೀವನ, ಬ್ಯುಸಿ ಲೈಫ್ ಅಂತ ಹೇಳುತ್ತೀವಲ್ಲ. ಹಳ್ಳಿ ಜೀವನ ತುಂಬ ನೆಮ್ಮದಿ ಹಾಗು ಖುಷಿಯ ಬದುಕು.
ಹಳ್ಳಿ ಜೀವನ ಸಾದಾರಣ ಜೀವನ. ತುಂಬ ಖರ್ಚು ವೆಚ್ಚವಿಲ್ಲದ ಜೀವನ. ಮನೆಯಲ್ಲೇ ತರಕಾರಿ ಭತ್ತ ಹಣ್ಣು ಹಂಪಲು ಗಳನ್ನು ಬೆಳೆದರೆ ಜೀವನ ನಡೆಸಲು ಕಷ್ಟವಿಲ್ಲ. ಹಣ್ಣು ತರಕಾರಿ ಗಳನ್ನೂ ಪೇಟೆಗೂ ನಾವು ಸೇಲ್ ಮಾಡಬಹುದು. ಮನೆಯಲ್ಲೇ ಬೆಳೆದ ತರಕಾರಿಗಳಿಗೆ ಬೇಡಿಕೆ ಹೆಚ್ಚು.
ಧನ ಕರು ಗಳಿದ್ದರೆ ಅದರಿಂದಲೂ ಹಾಲು ಮೊಸರು ಎಲ್ಲವನ್ನು ಉಪಯೋಗ ಮಾಡಬಹುದು. ಹಾಲನ್ನು ಮಾರಿ ಹಣ ಗಳಿಸಬಹುದು.
ಹಳ್ಳಿಯ ಮನೆಗಳು ನೋಡಲು ಚಂದ. ಸ್ವಚ್ಛ ಗಾಳಿ , ಪರಿಸರ ಶಾಂತ ವಾತಾವರಣ. ಮನೆ ಎಂಬ ಜನ ಖುಷಿಯಾದ ಬದುಕು.

ಇವಾಗಂತೂ ಹಳ್ಳಿ ಜೀವನ ಸ್ವಲ್ಪ ಬದಲಾವಣೆ ಆಗಿದೆ. ಮೊದಲಿನ ಹಾಗೆ ಇಲ್ಲ. ಹಳ್ಳಿ ವಾತಾವರಣ ಸ್ವಲ್ಪ ಬದಲಾಗಿದೆ. ಹಳ್ಳಿಗಳಲ್ಲೂ ವಾಹನ ಗಳ ದಟ್ಟಣೆ ಜಾಸ್ತಿ ಆಗಿದೆ. ಬೆಳಗಾದರೆ ಸಾಕು ಸಿಟಿಗೆ ಉದ್ಯೋಗಕೋಸ್ಕರ ಹೋಗುವವರು ಜಾಸ್ತಿ. ಅವರು ತಮ್ಮ ಸ್ವಂತ ವಾಹನ ಗಳನ್ನೂ ಬಳಸುತ್ತಾರೆ.

ಇವಾಗಿನ ಬ್ಯುಸಿ ಷೆಡ್ಯೂಲ್ ನಲ್ಲಿ ಹಳ್ಳಿ ಜೀವನದ ಅವಶ್ಯಕತೆ ಇದೆ. ಆರೋಗ್ಯದ ದ್ರಷ್ಟಿಯಿಂದಲೂ ಹಳ್ಳಿ ಲೈಫ್ ಬೆಸ್ಟ್ ಅನಿಸುತ್ತೆ ಹಳ್ಳಿ ಬದುಕನ್ನು ಒಮ್ಮೆಯಾದರು ಅನುಭವಿಸಬೇಕು ಎನ್ನುವುದು ನನ್ನ ಅಭಿಪ್ರಾಯ.

Design a site like this with WordPress.com
Get started